ಹಿಂದೆ ಗ್ಯಾಸ್ ಸಿಲಿಂಡರ್ ಬೇಕು ಎಂದಾದರೆ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೆ ಈಗ ತಂತ್ರಜ್ಞಾನದ ಬಳಕೆಯಿಂದ ಜನರು ಯಾವುದೇ ತೊಂದರೆಗಳಿಲ್ಲದೆ ಸುಲಭವಾಗಿ ಗ್ಯಾಸ್ ಸಿಲಿಂಡರ್ ಪಡೆಯುತ್ತಿದ್ದಾರೆ.
ಮೊಬೈಲ್ ಬುಕ್ಕಿಂಗ್ ಆರಂಭವಾದ ನಂತರ ಗ್ಯಾಸ್ ಬಳಕೆ ಕೂಡ ಕ್ರಮೇಣ ಹೆಚ್ಚುತ್ತಿದೆ. ಈಗ ವಾಟ್ಸಾಪ್ ನಿಂದಲೂ ಬುಕ್ ಮಾಡುವ ಅವಕಾಶ ಕಲ್ಪಿಸಿದೆ. ಹೌದು, ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗ್ಯಾಸ್ ಕಂಪನಿಗಳು ಹಲವಾರು ಬದಲಾವಣೆಗಳನ್ನು ಮಾಡುತ್ತಿದೆ. ಇದೀಗ ಎಲ್ ಪಿಜಿ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡುವ ಅವಕಾಶವನ್ನು ಕಲ್ಪಿಸಿ ಕೊಡಲಾಗಿದೆ. ಈ ವಿಧಾನದಿಂದ ಗ್ರಾಹಕರಿಗೆ ಅನುಕೂಲ ಮತ್ತು ಸರಳೀಕರಣದ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ.
ಗ್ಯಾಸ್ ಏಜೆನ್ಸಿ ಸಂಖ್ಯೆ ಅಥವಾ ಏಜೆನ್ಸಿ ಅಥವಾ ವಿತರಕರಿಗೆ ಕರೆ ಮಾಡುವ ಮೂಲಕ ಅಥವಾ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿ ಆರ್ಡರ್ ಮಾಡುವ ಮೂಲಕ ತಮ್ಮ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳನ್ನು ಹಲವರು ಬುಕ್ ಮಾಡುತ್ತಾರೆ. ಇದೀಗ ಇನ್ನು ಸುಲಭವಾಗಿ ಕಂಪನಿಯ ವಾಟ್ಸಾಪ್ ನಂಬರ್ ಗೆ ಸಂದೇಶವನ್ನು ಕಳುಹಿಸುವ ಮೂಲಕ ಸಿಲಿಂಡರ್ ನ್ನು ಬುಕ್ ಮಾಡಬಹುದಾಗಿದೆ. ಈಗ ಯಾವ ಯಾವ ಕಂಪನಿಯ ಗ್ಯಾಸ್ ಗಳನ್ನು ಯಾವ ರೀತಿ ಬುಕ್ ಮಾಡುವುದು ಎಂಬುದನ್ನು ಇಲ್ಲಿ ಗಮನಿಸೋಣ.
ಇಂಡಿಯನ್ (Indian)ಸಿಲಿಂಡರ್ ಗ್ರಾಹಕರು
ಇಂಡೇನ್ ಗ್ರಾಹಕರು ಸಿಲಿಂಡರ್ ನ್ನು ಬುಕ್ ಮಾಡಲು ಬಯಸಿದರೆ ಹೊಸ ಸಂಖ್ಯೆ 7718955555 ಗೆ ಕರೆ ಮಾಡಬಹುದು. ಅಥವಾ ವಾಟ್ಸಾಪ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದಾಗಿದೆ. ವಾಟ್ಸಾಪ್ ಮೆಸೆಂಜರ್‌ನಲ್ಲಿ, REFILL ಎಂದು ಟೈಪ್ ಮಾಡಿ ಮತ್ತು ಅದನ್ನು 7588888824 ಗೆ ಕಳುಹಿಸಬೇಕು. ಕಂಪನಿಯಲ್ಲಿ ನೋಂದಾಯಿಸಲಾದ ಗ್ರಾಹಕರ ಮೊಬೈಲ್ ನಂಬರ್ ನಿಂದ ಮಾತ್ರ ಮೆಸೇಜ್ ಕಳುಹಿಸಲು ಸಾಧ್ಯವಾಗುತ್ತದೆ.
ಹೆಚ್ ಪಿ(HP)ಸಿಲಿಂಡರ್ ಗ್ರಾಹಕರು
HP ಗ್ಯಾಸ್ ಸಿಲಿಂಡರ್ ಗ್ರಾಹಕರು ಸಿಲಿಂಡರ್ ನ್ನು ಬುಕ್ ಮಾಡಲು ಬಯಸಿದರೆ, ವಾಟ್ಸಾಪ್ ನಲ್ಲಿ 9222201122 ಗೆ ಮೆಸೇಜ್ ನ್ನು ಕಳುಹಿಸಬಹುದು. BOOKಎಂದು ಟೈಪ್ ಮಾಡಿ ಈ ಸಂಖ್ಯೆಗೆ ಕಳುಹಿಸಬೇಕು. ಬುಕ್ ಮಾಡಿದಾಗ ಕೆಲವು ಮಾಹಿತಿಗಳನ್ನು ಕೇಳಲಾಗುತ್ತದೆ. ಎಲ್‌ಪಿಜಿ ಕೋಟಾ, ಎಲ್‌ಪಿಜಿ ಐಡಿ, ಎಲ್‌ಪಿಜಿ ಸಬ್ಸಿಡಿ ಇತ್ಯಾದಿಗಳನ್ನು ಒಳಗೊಂಡಂತೆ ಇತರ ಹಲವು ಸೇವೆಗಳ ಸಂಬಂಧ ಮಾಹಿತಿಯನ್ನು ತಿಳಿದುಕೊಳ್ಳಲು ಹೆಚ್ ಪಿ ಗ್ರಾಹಕರು ಈ ನಂಬರ್ ನ್ನು ಬಳಸಬಹುದಾಗಿದೆ.
ಈ ಲೇಖನದಲ್ಲಿರುವ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..
ನಿಮ್ಮ ಪಿಎಫ್ ಹಣವನ್ನು ಮೊಬೈಲ್ ನಲ್ಲಿಯೇ ಡ್ರಾ ಮಾಡಬಹುದು... ಅದು ಹೇಗೆ?
ಎಲ್ಲಾ ಉದ್ಯೋಗಿಗಳ ತಮ್ಮ ಮಾಸಿಕ ವೇತನದ ಭಾಗವನ್ನು ಉದ್ಯೋಗಿಗಳ ಭವಿಷ್ಯ ನಿಧಿಗೆ (ಇಪಿಎಫ್) ವರ್ಗಾಯಿಸಲಾಗುತ್ತದೆ.
ಇಪಿಎಫ್ ಖಾತೆದಾರರು ತಮ್ಮ ಸಂಪೂರ್ಣ ಬ್ಯಾಲೆನ್ಸ್ ನ್ನು ಇಪಿಎಫ್‌ಒದಿಂದ ಹಿಂಪಡೆಯಬಹುದು. ಆದರೂ ಸಹ ಇಪಿಎಫ್ ಖಾತೆಗಳನ್ನು ಹೊಂದಿರುವ ಉದ್ಯೋಗಿಗಳು ತಮ್ಮ ಪಿಎಫ್ ಖಾತೆಯಿಂದ ತುರ್ತು ಸಂದರ್ಭಗಳಲ್ಲಿ ಹಣವನ್ನು ತೆಗೆದುಕೊಳ್ಳಬಹುದು. ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಇಪಿಎಫ್‌ನಿಂದ ಹಣವನ್ನು ಹಿಂಪಡೆಯಬಹುದು. ಹೆಚ್ಚುವರಿಯಾಗಿ, ಸರ್ಕಾರದ ಉಮಾಂಗ್ ಆಯಪ್ ಬಳಸಿಕೊಂಡು EPF ಹಣವನ್ನು ಹಿಂಪಡೆಯಬಹುದು. ಈ ಅಪ್ಲಿಕೇಶನ್ ಮೂಲಕ, ನೀವು ಮನೆಯಲ್ಲಿದ್ದಾಗ ನಿಮ್ಮ ಪಿಎಫ್ ಖಾತೆಯಿಂದ ಸಲೀಸಾಗಿ ಹಣವನ್ನು ಹಿಂಪಡೆಯಬಹುದು. ವಿಶೇಷವಾಗಿ ಜನರು ಮನೆ ಕಟ್ಟಲು, ಮದುವೆಯ ವೆಚ್ಚಗಳು ಮತ್ತು ಅವರ ಸ್ವಂತ ಅಥವಾ ಪ್ರೀತಿಪಾತ್ರರ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ತಮ್ಮ PF ಖಾತೆಯಿಂದ ಹಣವನ್ನು ತೆಗೆದುಕೊಳ್ಳುತ್ತಾರೆ. ಈ ಹಿಂದೆ ಪಿಎಫ್ ಖಾತೆಯಿಂದ ಹಣ ತೆಗೆಯಲು ಆಗಾಗ ಬ್ಯಾಂಕ್ ಅಥವಾ ಪಿಎಫ್ ಕಚೇರಿಗಳಿಗೆ ಅಲೆಯಬೇಕಾಗಿತ್ತು. ಆದರೆ, ನೀವು ಈಗ ಉಮಾಂಗ್ ಅಪ್ಲಿಕೇಶನ್ ಬಳಸಿ ಹಣವನ್ನು ಡ್ರಾ ಮಾಡಬಹುದಾಗಿದೆ.
ಉಮಾಂಗ್ ಅಪ್ಲಿಕೇಶನ್ ನ್ನು ಹೇಗೆ ಬಳಸುವುದು?
UMANG ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ EPFO ಖಾತೆಯಿಂದ ಹಣವನ್ನು ಹಿಂಪಡೆಯಲು ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (UAN) ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಕೆಳಗೆ ಪಟ್ಟಿ ಮಾಡಲಾದ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ EPF ಖಾತೆಯಿಂದ ನೀವು ಹಣ ಡ್ರಾ ಮಾಡಬಹುದಾಗಿದೆ.
- ಮೊದಲು ಉಮಾಂಗ್ ಆ್ಯಪ್ ಡೌನ್‌ಲೋಡ್ ಮಾಡಿ. ಮುಂದಿನ ಹಂತವು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸುವುದು.
- ಆ್ಯಪ್‌ನ ಹಲವಾರು ಆಯ್ಕೆಗಳಿಂದ EPFOಯನ್ನು ಆಯ್ಕೆ ಮಾಡಿ.
- right ಆಯ್ಕೆ ಮಾಡಿ ಮತ್ತು ನಿಮ್ಮ UAN ಸಂಖ್ಯೆಯನ್ನು ನಮೂದಿಸಿ.
- ನಿಮ್ಮ EPFO-ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನಮೂದಿಸಿ.
- ನಿಮ್ಮ PF ಖಾತೆಯಿಂದ ಹಣವನ್ನು ಡ್ರಾ ವಿಧಾನವನ್ನು ಆಯ್ಕೆ ಮಾಡಿ ಮತ್ತು ಅರ್ಜಿಯನ್ನು ಪೂರ್ಣಗೊಳಿಸಿ.
- ಫಾರ್ಮ್ ಅನ್ನು ಸಲ್ಲಿಸಿದ ನಂತರ ವಿತ್ ಡ್ರಾ ಅಪ್ಲಿಕೇಶನ್‌ಗೆ reference ಸಂಖ್ಯೆಯನ್ನು ಸ್ವೀಕರಿಸಿ.
- ವಿತ್ ಡ್ರಾ ವಿನಂತಿಯನ್ನು ಅನುಸರಿಸಲು ಈ reference ಸಂಖ್ಯೆಯನ್ನು ಬಳಸಬಹುದು.
ತುರ್ತು ವೆಚ್ಚಗಳಿಗಾಗಿ ಹಣವನ್ನು ಹಿಂಪಡೆಯಲು ಉಮಂಗ್ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಬ್ಯಾಂಕ್ ಅಥವಾ ಪಿಎಫ್ ಕಚೇರಿಗೆ ಭೇಟಿ ನೀಡದೆಯೇ ಹಣವನ್ನು ಹಿಂಪಡೆಯಲು ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ. ಆದರೆ, ನಿಮ್ಮ ಖಾತೆಯಿಂದ ಹಣವನ್ನು ಡ್ರಾ ಮಾಡಲು ನೀವು ಸಾಕಷ್ಟು ಕಾರಣವನ್ನು ನೀಡಬೇಕು.
ತುರ್ತು ವೆಚ್ಚಗಳಿಗಾಗಿ ಉಮಾಂಗ್ ಅಪ್ಲಿಕೇಶನ್ ಮೂಲಕ ಹಣವನ್ನು ಹಿಂಪಡೆಯಬಹುದು. ಈ ಅಪ್ಲಿಕೇಶನ್‌ನೊಂದಿಗೆ, ನೀವು ಬ್ಯಾಂಕ್ ಅಥವಾ ಪಿಎಫ್ ಕಚೇರಿಗೆ ಹೋಗದೆಯೇ ಹಿಂಪಡೆಯಬಹುದು. ಆದರೆ, ನಿಮ್ಮ ಖಾತೆಯಿಂದ ಹಣವನ್ನು ತೆಗೆದುಕೊಳ್ಳುವ ಮೊದಲು ನೀವು ಉತ್ತಮ ಸಮರ್ಥನೆಯನ್ನು ಒದಗಿಸಬೇಕು.
ಆನ್‌ಲೈನ್‌ನಲ್ಲಿ ಹೇಗೆ ಡ್ರಾ ಮಾಡುವುದು?
- https://unifiedportal-mem.epfindia.gov.in/memberinterface/ ನಲ್ಲಿ ಮೊದಲು UAN ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
- ಲಾಗ್ ಇನ್ ಮಾಡಲು ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ. ನಂತರ ದೃಢೀಕರಣ ಕ್ಯಾಪ್ಚಾ ಟೈಪ್ ಮಾಡಿ.
- ಈಗ ಕ್ಲಿಕ್ ಮಾಡುವ ಮೂಲಕ "ಆನ್‌ಲೈನ್ ಸೇವೆಗಳು" ಅಡಿಯಲ್ಲಿ ಕ್ಲೈಮ್ ಆಯ್ಕೆಯನ್ನು ಆರಿಸಿ.
- ನಂತರ, ನಿಮ್ಮ ಬ್ಯಾಂಕ್ ಖಾತೆಗೆ ಸಂಖ್ಯೆಯನ್ನು ನಮೂದಿಸಿ. 'ಪರಿಶೀಲಿಸಿ' ಕ್ಲಿಕ್ ಮಾಡಬೇಕು.
- ಮುಂದೆ, ಮುಂದುವರಿಸಲು "ಹೌದು" ಆಯ್ಕೆ ಮಾಡಿ.
- 'ಪ್ರೊಸೀಡ್ ಫಾರ್ ಆನ್‌ಲೈನ್ ಕ್ಲೈಮ್' ಅನ್ನು ಕ್ಲಿಕ್ ಮಾಡಬೇಕು.
- ಈಗ, ಕ್ಲೈಮ್ ಫಾರ್ಮ್‌ನ "I would like to apply" ವಿಭಾಗದಲ್ಲಿ, ನೀವು ಕ್ಲೈಮ್ ಮಾಡುತ್ತಿರುವ ಕಾರಣವನ್ನು ಆಯ್ಕೆ ಮಾಡಿ. ನಿಮ್ಮ ಹಣವನ್ನು ಡ್ರಾ ಮಾಡಲು ಈ ಹಂತದಲ್ಲಿ 'PF ಅಡ್ವಾನ್ಸ್ (ಫಾರ್ಮ್ 31)' ಆಯ್ಕೆ ಮಾಡಿ. ಅದನ್ನು ಅನುಸರಿಸಿ, ನಿಮ್ಮ ವಿಳಾಸ, ನಿಮಗೆ ಅಗತ್ಯವಿರುವ ಹಣದ ಮೊತ್ತ ಮತ್ತು ಹಿಂತೆಗೆದುಕೊಳ್ಳುವಿಕೆಯ ಕಾರಣವನ್ನು ನೀವು ನಮೂದಿಸಬೇಕು.
- ಈಗ ಪ್ರಮಾಣಪತ್ರದ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಅರ್ಜಿಯನ್ನು ಸಲ್ಲಿಸಿ. ಅದರೊಂದಿಗೆ ಅಗತ್ಯ ದಾಖಲೆಗಳು ಇರಲಿ.
- ಉದ್ಯೋಗದಾತರು Withdrawal request ಅನ್ನು ಅನುಮೋದಿಸಿದರೆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
Watch Video: ಕಪಿರಾಯನ ನೂತನ ಕೇಶ ವಿನ್ಯಾಸ ನೋಡಿ! ನೆಟ್ಟಿಗರು ಫೀದಾ!!
ನೀವು ಗೊರಕೆಯ ಸಮಸ್ಯೆಯಿಂದ ಬಳಲುತ್ತಿದ್ದೀರಾ?.. ಇಲ್ಲಿವೆ ಗೊರಕೆ ತಡೆಗಟ್ಟಲು ಕೆಲವು ಸಲಹೆಗಳು.
ಮಲ್ಬರಿ ಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ತಿಳಿದಿದ್ಯಾ?